Wednesday, February 24, 2010

ಯಾಕೆ ಹೀಗೆ ?

ಯಾಕೆ ಹೀಗೆ ?
*******************
ಇದೆಲ್ಲ ಸರಿ ಕಾಣಿಸುತ್ತ ನಿಮಗೆ .ಹೇಳಿ..ನನಗಂತೂ ಇಲ್ಲ : ನಿಮ್ಮ ಅಭಿಪ್ರಾಯನ

ನನಗೆ ಹೇಳಿ ಪ್ಲೀಸ್ :


ನನ್ನ ದಿನಚರಿಯಲ್ಲಿನ ಒಂದು ಭಾಗ :
**********************************
೧.     ಬಸ್ಸು  ತು೦ಬಾ ರಶ್ ಇರುತ್ತೆ ನೀವು ನಿಂತು ಕೊ೦ಡು ಇರ್ತೀರ ..ನಿಲ್ಲಕ್ಕು

ಸರಿಯಾಗಿ ಜಾಗ ಇರಲ್ಲ..ನಿಮ್ ಹತ್ರ ಒಂದು ಹುಡುಗಿ ನಿ೦ತು ಕೊ೦ಡು ಇದ್ದಾಳೆ

ಅ೦ತ ಇಟ್ಕೊಳ್ಳಿ ..ನಿಮ್ ಮೈ  ಅವಳಿಗೆ ಟಚ್ ಆಗುತ್ತೋ ಇಲ್ವೋ.. ಬಸ್ ಗೆ     ಬಿದ್ದಾಗ ,ನಮ್ಮ ಹಿಂದಿನವರು ಇಳಿಲಿಕ್ಕೆ ಇದ್ದಾಗ ..ನಾವು

ಸ್ವಲ್ಪ ಅಡ್ಜಸ್ಟ್ ಆಗ್ಲೆಬೇಕಲ್ವ..ಆದ್ರೆ  ಇಂಥಹ ಹುಡುಗಿಯರಿಗೆ ಅದೆಲ್ಲ

ಯಾಕೆ ಅರ್ಥ   ಆಗಲ್ಲ ..ತಾವೇ ದೊಡ್ಡ ಸೌಂದರ್ಯ ರಾಣಿಯರ ತರ

ಮಾಡ್ತಾರೆ ...ಅಷ್ಟೆಲ್ಲ ಕಷ್ಟ ಆಗುವವರು ಯಾಕ್ರಿ ಬರಬೇಕು ಬಸ್ಸಲ್ಲಿ ಪ್ರೈವೇಟ್  ವೆಹಿಕಲ್
 ಮಾಡ್ಕೊ೦ಡು ಹೋಗ್ಬೇಕು..ಅದ್ರ ಬದಲಿಗೆ ಬಾಯಲ್ಲಿ ಶೇ ..ಶು ,,ಅಂತ ಮಣ    ಮಣ  ಮ೦ತ್ರ  ಯಾಕೆ ಹೇಳ್ಬೇಕು ....ಅಲ್ವ , ಹೇಳಿ ನೀವು ,,


೨.   ಇನ್ನು ಕೆಲವರು ರಶ್ ಇದ್ದ ಬಸ್ಸಿಗೆ ಹತ್ತುತ್ತಾರೆ ಅಲ್ವ..ಅವರಿಗೆ ಅದೇ ಚಾನ್ಸ್ ...

ಮೈಗೆ ಮೈ  ತಾಗಿಸೋಕೆ , ಕೈ ಗೆ ಕೆಲಸ ಕೊಡೋಕೆ ,,ಎಲ್ಲ.. ಎಂಥ ಎಂಥ ಜನ

ಇರ್ತಾರೆ.  ಈ ಕಾಟನ ಅನುಭವಿಸಿದವರಿಗಷ್ಟೇ ಗೊತ್ತು ಏನು ಅವಸ್ಥೆ ಅ೦ಥ.ಪಾಪದ

ಹುಡುಗಿಯರಾದರೆ ಒ೦ದು ಕಷ್ಟವೇ ಸರಿ.. ಏನೆಲ್ಲ ಸರ್ಕಸ್ ಮಾಡ್ತಾರೆ ...ಇಂಥವರಿಂದ

ತಪ್ಪಿಸಿಕೊಳ್ಳಲು ,,, ಜೋರಿನ ಹುಡುಗಿಯರಾದರೆ ಕಾಲಿನ  ಚಪ್ಪಲಲ್ಲೇ   ರುಚಿ

ತೋರಿಸ್ತಾರೆ ...

ನಿಜವಾಗಿಯೂ ಹುಡುಗಿಯರು ಇದನ್ನೆಲ್ಲಾ ಎದುರಿಸಬೇಕು. ಇಲ್ಲಾಂದ್ರೆ ನೋಡುವವರು

ತಪ್ಪು ತಿಳ್ಕೊಳ್ತ್ಹಾರೆ.. ದೈರ್ಯದಿ೦ದ ಎದುರಿಸಿದರೆ ಮಾತ್ರ ನಿಮಗೆ ಗೆಲುವು,,,

ಇಲ್ಲಾಂದ್ರೆ ಹೆಜ್ಜೆ ಹೆಜ್ಜೆ ಗೂ ಇಂಥ ಘಟನೆಗಳು ನಿಮ್ಮ  ಹಿ೦ದೆ ಸಾಲು ಸಾಲಾಗಿ ಬರಲಿಕ್ಕೆ  ಸುರುವಾಗುತ್ತೆ,,


೩.   ಇನ್ನು ಸೀಟಿನಲ್ಲಿ ಕುಳಿತು ಕೊ೦ಡು ಕಾಲು ಆಡಿಸುವವ್ರಿಗೆ ಏನು ಕಮ್ಮಿ ಇಲ್ಲ..

ಯಾರಾದ್ರೂ ಮಗು ಎತ್ಕೊಂಡು ಬಸ್ ಹತ್ತಿದ್ರು ಕೂಡ ಇವರು    ಎಳೋರಲ್ಲ.. ಇನ್ನು

ಅಜ್ಜ ಅಜ್ಜಿಯರು ಬಸ್ಸಿಗೆ ಹತ್ತಿದ್ರು ಕಣ್ಣು ಕಾಣಿಸಲ್ಲ ಇವರಿಗೆ ,,

ಇಂಥವರಿಗೆಲ್ಲ ಲೈಫ್ ನಲ್ಲಿ ಅಡ್ಜಸ್ಟ್  ಆಗಿ ಅಭ್ಯಾಸವೇ ಇರಲ್ವಾ .... ಅಂತ ,, ನೀವೇನು

ಹೇಳ್ತೀರಾ?


೪.   ನಿಮಗೆ ಪರಿಚಯ ಇರುತ್ತೆ ,,ಅವರಿಗೂ ಪರಿಚಯ ಇರುತ್ತೆ..  ಎಲ್ಲೊ ಒಂದು ಕಡೆ

ಹೋಗುವಾಗ  ದಾರಿ ಮಧ್ಯ ಸಿಕ್ತಾರೆ ..ಕಣ್ಣು ಕಣ್ಣು ನೋಡ್ತಾರೆ .ಮತ್ತೆ ಪರಿಚಯವೇ

ಇಲ್ಲದ ತರ  ಹೋಗ್ತಾರೆ ..ನೋಡಿಯೂ ನೋಡದವರ ಹಾಗೆ ಮಾಡ್ತಾರಲ್ಲ ,,

ಯಾಕೆ ಹೀಗೆ ಹೇಳಿ ..ಪ್ಲೀಸ್  


 ೫.ಜೀವನದಲಿ ಮುಂದೆ ಬರ್ಬೇಕಿದ್ರೆ ಹೊ೦ದಾಣಿಕೆ  ಮುಖ್ಯ ಅ೦ತಾರಲ್ಲ ,,,ಎಲ್ಲರೂ

ಹೀಗೆ ಮು೦ದೆ ಬರ್ತಾರ ,,,ನಾ ನ೦ಬಲ್ಲ ..
     
ಹೊ೦ದಾಣಿಕೆ ಮಾಡಿದಷ್ಟು  ನಮ್ಮನ್ನು ಹೊ೦ದಿಸ್ತಾರೆ ,, ಮತ್ತೆ  ಹ೦ತ ಹ೦ತವಾಗಿ

ಕೊಂದು ಬಿಡ್ತಾರೆ ,, ಯಾವತ್ತು ಬಗ್ಗಿದವರಿಗೆ ಗುದ್ದು  ಜಾಸ್ತಿ ಅನ್ನೋ ಮಾತು

ನೆನಪಿರಲಿ..

೬.ಕೆಲವರು ಎಷ್ಟು  ಕಠಿಣವಾಗಿ  ವರ್ತಿಸ್ತಾರಲ್ವ.. ಅದೂ ನಮಗೆ ಯಾಕೆ ಆಗಲ್ಲ... ಎಷ್ಟು

ಪ್ರಯತ್ನ ಪಟ್ಟರು ಒಬ್ಬರ ಮನಸ್ಸಿಗೆ ನೋವು ಮಾಡೋಕೆ ಆಗಲ್ಲ ಅಲ್ವ..ಕೆಲವರಿಗೆ

ಅದೂ ಒ೦ಥರ ಕುಶಿ ಕೊಡುತ್ತೋ ಏನೋ ?

4 comments:

ಸೀತಾರಾಮ. ಕೆ. said...

ತಾವೂ ಹೇಳಿದ್ದು ಸತ್ಯ.
೧. ತು೦ಬಿದ ಬಸ್ಸನಲ್ಲಿ ಅಕಸ್ಮಾತಾಗಿ ಕೈ-ಮೈ ಮುಟ್ಟುವದು ಸಹಜ-ಕೆಲವೊಮ್ಮೆ ಅವೇ ಗಲಾಟೆಗೂ ಕಾರಣ ಆಗಿ ಬಿಡುತ್ತವೇ! ಹಾಗಾ೦ತ ಮೈ-ಕೈ ಸವರುವ ಪ್ರಸ೦ಗಗಳು ಎಲ್ಲಾ ಸಮಯದಲ್ಲಿ ಅಕಸ್ಮಾತಲ್ಲ ಕೆಲವೂದು ಜನ ಬೇಕ೦ತ ಮಾಡಲೂ ಬಹುದು.
೨.ಅಮಾಯಕ ಹೆಣ್ಣು ಗಳಿಗೆ ಬಸ್ಸಲ್ಲಿ ಕೀಟಲೆ ಕೊಡುವ ಜನ ಹೆಚ್ಚು. ಕೈ-ಗೆ ಚಪ್ಪಲಿ ಬ೦ದರೇ ಸರಿ. ಇಲ್ಲವೇ ಹೇರ್-ಪಿನ್ ಚುಚ್ಚಬಹುದು ಗೊತ್ತಾಗದ೦ತೆ!
೩.ಸುಖವಾಗಿ ಪ್ರಯಾಣಿಸುತ್ತಾ ಬೇರೆಯವರ ಕಷ್ಟ ಅವರವರ ಕರ್ಮ ಎನ್ನೋ ಧೋರಣೆ ಜನ ಇದ್ದಾರೆ ಹಾಗ೦ತ ಬೇರೆಯವರ ಕಷ್ಟಕ್ಕೆ ಆಗೋ ಜನಾನು ತಿರುಗುತ್ತಾರೆ.
೪. ಕೆಲೊವೊಮ್ಮೆ ಪರಿಚಿತರ೦ತೆ ಕೆಲೊವೊಮ್ಮೆ ಅಪರಿಚಿತರ೦ತೆ ವರ್ಥಿಸುವ ಜನ ಅವರಲ್ಲಿ ಅವರಿಗೆ ನ೦ಬಿಕೆ ಇರದ ಜನ ಅಥವಾ ಅವರ ಪರಿಚಯದಲ್ಲಿ ಸೋಗಲಾಡಿತನ ಅಥವಾ ಸ್ವರ್ಥ ಕಾರಣಗಳಿರುತ್ತೆ.
೫. ಹೊ೦ದಾಣಿಕೆ ನಮ್ಮತನವನ್ನ ಕಳೆದುಕೊಳ್ಳೋ ಮಟ್ಟದಲ್ಲಿರಬಾರದು ಮತ್ತು ಅದು ಎರಡು ಕಡೆಯಿ೦ದ ಸಮಾನವಾಗಿರಬೇಕು.
ಕೆಲವು ಸೂಕ್ತ ಸಾಮಾಜಿಕ ಪ್ರಶ್ನೇಗಳನ್ನೇತ್ತಿದ್ದಿರಾ... ಧನ್ಯವಾದಗಳು.

shetty said...

Sir

Thanks alot for your feedback..

Shashiraj said...

Wonderful !!!. At least some people who read this comments can understand the truths of life and the situations. Keep commenting such sensitive facts so that you can contribute your service to the social rather giving big speech like politicians or fraud social workers.
Life without emotions and sentiments is not a life but a worst burden than the useless animals on the earth !! Patients is the parents of social activities right ?
Your interests and the fovourites are of so manners that if this is touched by the whole world,no boubt the earth will become a heaven one day !!!
Thank you, regards Shashi

shetty said...

Shashi Sir


thanku so much for yu feed back..

I appreciate it..

Regards. & wishes,,,,